ಮಳೆ. ....ಇಳೆ
ಮಳೆಯು ಸುರಿದು
ಇಳೆಯು ಬಿರಿದು
ಹರ್ಷದಿಂದ ನಕ್ಕಿತು
ಹಸಿರ ಒಡಲಲಿ
ಹೂವ ತುಂಬಿ
ದುಂಬಿಗಳನು ಕರೆಯಿತು
ಹೂವ ಜೇನನು ಹೀರಿ
ದಣಿದ ದುಂಬಿ
ನಲಿಯಿತು ಹರ್ಷದಿ
ಬಣ್ಣ ಬಣ್ಣದ ಹೂವು
ತುಂಬಿ ಪ್ರಕೃತಿ ನಲಿದಳು
ಮುದದಲಿ
ಕಂಪು ತುಂಬಿದ ಬೀಸು
ಗಾಳಿಯು ಮನಕೆ
ತಂದಿತು ಕಚಗುಳಿ
ಚಿಗುರು ಹೂವು ಹೊತ್ತು
ಪ್ರಕೃತಿ ನಗುತ ನಿಂದಳು
ಮುದದಲಿ
ಎಲ್ಲಿ ನೋಡಲಿ ಹಸಿರು
ಮನದಿ ತುಂಬಿತು ಉಸಿರು
ಕಣ್ಣು ತುಂಬಿದ ಬಸಿರು
ಪ್ರಕೃತಿ ಸಿರಿತುಂಬಿ ತುಳುಕಿ
ಖಳೆಯು ತಂದಿತು ಇಳೆಯಲಿ
ಮುದವ ತುಂಬಿತು ಮನದಲಿ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment