ಕನ್ನಡ ಶಾಲೆ
ಪ್ರಕೃತಿಯೊಡನಾಡುತ ಕಲಿ
ಸಹಪಾತಿಗಳೊಡನೆ ಕೂಡಿ ನಲಿ
ಬಾಲ್ಯದ ಅನಂದವ ಸವಿ
ಕನ್ನಡ ಶಾಲೆಯ ಕಂದ
ಹಕ್ಕಿಗಳನೊಡನಾಟದಿ ಕಲಿತು ಬಂದ
ಜೀವನಕೆ ಸುಖ ಶಾಂತಿ ತಂದ
ಕನ್ನಡ ಭಾಷೆಯ ಸವಿ ಸವಿದು
ಅಡುತ ಕುಣಿಯುತ ಕಲಿತು
ಜೀವನ ಪಾಠವ ಅರಿತು
ಬದುಕಿನಾ ನಂದದಲಿ ಬೆರೆತು
ಕಲಿಯುವೆ ಬದುಕಿನ ಪಾಠ
ಪಡೆಯುವೆ ಸುಖೀ ಜೀವನದಾಟ
ಕನ್ನಡ ಶಾಲೆಲಿ ಕಲಿವರು ನೀತಿ
ಇರದು ಎಂದಿಗೂ ಭೀತಿ
ಹೊಂವರ್ಕನ ಹೊರೆಯಿಲ್ಲ
ಹೆಗಲಿಗೆ ಭಾರದ ಚೀಲವಿಲ್ಲ
ಕನ್ನಡ ಭಾಷೆಯ ಸವಿಯುವ ಅಂದ
ತೊದಲು ನುಡಿಯಲೂ ನುಡಿವನು ಕಂದ
ಆಡುತ ಕುಣಿಯುತ ಕಲಿಯುವ ಚಂದ
ಇಂಗ್ಲಿಷ್ ಶಾಲೆಲಿ ಇರುವುದೇ ಕಂದ
ಪಂಕಜಾ. ಕೆ.
Comments
Post a Comment