ಮೂಡುತಿದೆ ಕವಿತೆ
ಮೂಡಣದಿ ರವಿ ಮೂಡುತಿರುವಾಗ
ಮನದಲ್ಲಿ ಉಕ್ಕುತಿದೆ ಹೊಸತೊಂದು ರಾಗ
ಬಾಂದಳದಿ ಬೆಳ್ಳಿ ಚುಕ್ಕೆಗಳು ನಕ್ಕವೆಂದು
ಮೂಡಿತೊಂದು ಸುಂದರ ಕವಿತೆ
ಬಾನಲಿ ಹಾರಡುತಿರುವ ಹಕ್ಕಿಗಳ ಕಂಡು
ಹೊಮ್ಮಿತು ಮನದಲ್ಲಿ ಕವಿತೆಗಳ ದಂಡು
ಹಸಿರು ತುಂಬಿದ ಭೂರಮೆಯ ಕಂಡು
ಗುಣುಗುಣಿಸುತಿದೆ ಮನವು ಕವಿತೆಯ ತುಂಡು
ನೀಲ ಬಾನಲಿ ಹೊಳೆಯುವ ಮುಗಿಲ ಕಂಡು
ಹೊಸತೊಂದು ಕವಿತೆ ಮೂಡಿ ಬಂತು
ನನ್ನೊಳಗೆ ಅವಿತಿರುವ ಕವಿಮನಸು ಇಂದು
ಹಾಡುತಿದೆಕವಿತೆಗಳಮಾಲೆಯನು ನೇಯ್ದು
ಪಂಕಜಾ.ಕೆ.
Comments
Post a Comment