ಒಲವ ಹಾಡು
ನೀ ಸುರಿಸುವ ಒಲವ ಧಾರೆಗೆ
ಮನಸು ನವಿಲಿನ ತೆರದಿ ನರ್ತಿಸುತ್ತಿದೆ
ಆಗಾಗ ನೀ ತೋರುವ ಒಲವ ಹನಿ
ನಾಬಲ್ಲೆ ಅದರ ಸವಿ
ನಿನ್ನ ಒಲವಿನ ಸೋನೆ ಮಳೆಯಲಿ
ಮರೆತೆ ನನ್ನ ನೋವನೆಲ್ಲ
ಪ್ರಿಯ ನೀ ಬಂದು ನನ್ನ ಜತೆಯಾಗಿರಲು
ಬಾಳು ಆಗುತ್ತಿದೆ ಹೂ ಬನ
ಹೊನ್ನಿನಾಭರಣ ಬೇಡ ನಿನ್ನೊಲವಿರಲು
ಸಾಕು ನೀ ಕೊಡುವ ಮುತ್ತಿನ ಹರಳು
ನಿನ್ನಒಲವಿನ ಸೋನೆ ಮಳೆಯಲಿ
ನೆನೆಯುತ್ತಿದ್ದರೆ ಸ್ವರ್ಗ ಬೇರಿನ್ನು ಬೇಕಿಲ್ಲ ನಲ್ಲ
ಪಂಕಜಾ.ಕೆ.
Comments
Post a Comment