ನಗು
ಮನದಲಿ ತುಂಬಿದ ಮಾಧುರ್ಯ
ಮುಖದಲ್ಲಿ ಅರಳಿದೆ ನಗೆಯಾಗಿ
ನಗುಮುಖ ತರುವುದು ಆಹ್ಲಾದ
ಜೀವನದಲ್ಲಿ ತುಂಬುವುದು ಉಲ್ಲಾಸ
ಸೂರ್ಯನ ಪ್ರಕಾಶದ ತೆರದಿ
ಬೆಳಗುವುದು ಮನೆ ಮನ
ಮನಸಲ್ಲಿ ತುಂಬಿದ ಉಲ್ಲಾಸ
ತರುವುದು ಸುಖ ಸಂತೋಷ
ನಗುವುದು ನಗಿಸುವುದು ಧರ್ಮ
ನಗುವೇ ಬಾಳಿನ ಮರ್ಮ
ನಗುತಿರಿ ನಗಿಸಿರಿ ಎಂದೆಂದೂ
ಪಡೆಯಿರಿ ಲವಲವಿಕೆಯ ನೆಂದೂ
ಪಂಕಜಾ. ಕೆ.
Comments
Post a Comment