ಬೆಳ್ಳಿ ಚುಕ್ಕಿ
ಮೂಡುತ್ತಿದೆ ಬಾನಿನಲಿ ಬೆಳ್ಳಿ ಚುಕ್ಕಿ
ಮುತ್ತಿನ ಮಣಿಗಳನು ಪೋಣಿಸಿದಂತೆ
ಕತ್ತಲೆಯ ರಾತ್ರಿಯನುಸರಿಸುತ್ತ
ಚುಕ್ಕಿಗಳನೊಡನಾಡುತ್ತ ಚಂದಿರ ಬಂದ
ಕಾರಿರುಳ ರಾತ್ರಿಯಲ್ಲಿ ಹಾಲು ಚೆಲ್ಲಿದಂತೆ
ಧರೆಯಲ್ಲಿ ತುಂಬಿತು ಶಶಿ ಕಿರಣ
ಚುಕ್ಕಿ ಚಂದ್ರಮರೊಡನಾಟಕೆ
ದಳಗಳ ಅರಳಿಸುತ ನೈದಿಲೆ ನಕ್ಕಿತು
ದುಂಬಿಗಳಝೇಂಕಾರವುಕಿವಿಗಳತುಂಬಿ
ಮನಕೆ ಮುದವನು ತಂದಿತು
ತಂಪು ಗಾಳಿಯು ಬೀಸಿ ತನುವಿಗೆ
ಉಲ್ಲಾಸ ಹುರುಪನು ತುಂಬಿತು
ಬೆಳ್ಳಿ ಚುಕ್ಕಿಯು ಕಣ್ಣ ಮಿಟುಕಿಸಿ
ನಭದ ತುಂಬಾ ಹರಡಿತು
ಪ್ರಕೃತಿ ಸೌಂದರ್ಯ ವ ಸವಿಯುತ
ಮನದಿ ತುಂಬಿತು ತನಿರಸ
ಪ್ರಕೃತಿಯೊಡನಾಟವು
ಕಣ್ಣು ಮನ ತುಂಬುವ ನೋಟವು
ದೇವ ಸೃಷ್ಟಿಯ ಅದ್ಬುತ
ಸಿಗುವುದಿಲ್ಲಿ ನೆಮ್ಮದಿ ಶಾಶ್ವತ
ಪಂಕಜಾ.ಕೆ. ಮುಡಿಪು
Comments
Post a Comment