ಹಸಿರ ಸಿರಿ
ಸುತ್ತೆಲ್ಲಾ ಹಸಿರಿನ ಬೆಟ್ಟ
ಮೇಲೆ ಬಾನಲ್ಲಿ ಮಂಜಿನಾ ಬೆಟ್ಟ
ಹರಡಿರುವ ಇಬ್ಬನಿಯ ಲಾಸ್ಯ
ಕಣ್ಣು ತುಂಬುವ ಹಸಿರಿನ ನಾಟ್ಯ
ಹರಿಯುತ್ತಿರುವ ನೀರ ತೊರೆ
ಕೂಗುತಿರುವ ಕೋಗಿಲೆಯ ಕರೆ
ನವಿಲಿನ ನಾಟ್ಯದ ರಂಗು
ಕೋಗಿಲೆಯ ಕೂಗಿನ ಗುಂಗು
ಬಾನಲ್ಲಿ ಹರಡಿರುವ ಬಣ್ಣಗಳ ರಂಗು
ಮನಕೆ ತುಂಬುವುದು ಉಲ್ಲಾಸದ ಗುಂಗು
ಸೃಷ್ಟಿಯಲಿ ತುಂಬಿರುವ ವಿಸ್ಮಯ
ಸವಿಯುತ್ತಾ ಮೈ ಮನ ತನ್ಮಯ
ಪ್ರಕೃತಿ ಸೌಂದರ್ಯದ ತವರು
ಪುಣ್ಯಭೂಮಿ ಭಾರತವೆಂಬ ಊರು
ಹುಟ್ಟಿದರೆ ನಾವಿಲ್ಲೇಹುಟ್ಟಬೇಕು
ಪ್ರಕೃತಿ ಸೌಂದರ್ಯದ ಆರಾಧನೆಯೇ ಸಾಕು
ಪ್ರಕೃತಿ ಕೊಡುವುದು ಆರೋಗ್ಯ ಭಾಗ್ಯ
ಉಳಿಸಿ ಕೊಂಡರೆ ಸಿಕ್ಕೀತು ಸೌಭಾಗ್ಯ
ಪಂಕಜಾ.ಕೆ.
Comments
Post a Comment