ಯಾಕೆ ಹೀಗೆ
ನೀನಂದು ನಕ್ಕಾಗ ಮೈಯಲ್ಲಿ ಪುಳಕ
ನಾನಂದು ಅತ್ತಾಗ ನಿನಗೇನೋ ಆತಂಕ
ಮೈಯಲ್ಲಿ ತುಂಬುತಿದೆ ಹೊಸರಾಗ
ಹಾಡುತಿದೆ ಕೋಗಿಲೆಯ ಸವಿಗಾನ
ಕಣ್ಣುಕಣ್ಣುಸೇರಿದಾಗಮುಖವೆಲ್ಲ ಕೆಂಪು
ನಿನ್ನ ಕುಡಿನೋಟ ಮನಕಂದು ತಂಪು
ಕೈ ಹಿಡಿದು ಎಳೆದಾಗ ಮೈಯಲ್ಲಿ ನಡುಕ
ಬೇಡ ಬೇಡವೆಂದರೂ ಬೇಕೆನ್ನುವ ತವಕ
ಹೂಮನಸು ನವಿಲಂತೆ ಗರಿಗೆದರಿ ಕುಣಿದು
ಮನದಲ್ಲಿ ಕನಸುಗಳ ಸರಮಾಲೆ ಹೆಣೆದು
ಮುದುಡಿದ್ದ ಮೊಗ್ಗುಒಂದು ಚೆಲುವಾಗಿಅರಳಿ
ಸಂತಸದ ಕಾರಂಜಿ ಉಕ್ಕೇರಿ ನರಳಿ
ಯಾಕಿಂತ ಭಾವವು ಮನಕಂದು ಬಂತು
ನಾನರಿಯೆ ಈ ಪರಿಯಾಕೆಂದು ನನಗೇನು ಗೊತ್ತು
ಪಂಕಜಾ.ಕೆ.
Comments
Post a Comment