ಮದುವೆ ಸಂಭ್ರಮ
ಮದುವೆಯಸಂಭ್ರಮನೋಡವ್ವ
ಮನೆತುಂಬಾ ನೆಂಟರು ತುಂಬಿಯರಪ್ಪ
ಅಡುಗೆಗೆ ಜನ ಬಂದರಪ್ಪ
ಬೇಗ ಬೇಗ ಚಪ್ಪರ ಕಟ್ಟ ಬೇಕಪ್ಪ
ಎಲ್ಲೆಲ್ಲೂ ಸಂಭ್ರಮ ನೋಡವ್ವ
ದಿಬ್ಬಣ ಬಂತು ನೋಡವ್ವ
ದಿಬ್ಬಣ ಎದುರುಗೊಳ್ಳಲು ಬಾರವ್ವ
ಬ್ಯಾಂಡು ವಾಲಗ ಇರಲವ್ವ
ಅರಸಿನ ಕುಂಕುಮನೀರು ತಾರವ್ವ
ಆರತಿ ಎತ್ತಿ ಕರೆತರಬೇಕವ್ವ
ರೂಪದಲ್ಲಿ ಆತ ಮನ್ಮಥನವ್ವ
ಕೇರಿಗೆಲ್ಲಾ ಒಬ್ಬನೇ ಗಂಡವ್ವ
ನಮ್ಮ ಮಗಳು ಭೂಲೋಕದ ರಂಬೆವ್ವ
ಅಚ್ಚಕೆಂಪು ಸೀರೆ ಉಟ್ಟಳವ್ವ
ಕೈತುಂಬಾ ಬಳೆ ತೊಟ್ಟಳವ್ವ
ಸಿರಿಗೌರಿ ಅಂತವಳವ್ವ
ಏಳು ಮಲ್ಲಿಗೆ ತೂಕದ ರಾಜಕುಮಾರಿಯವ್ವ
ಬೇಗನೆ ಹಸೆಗೆ ಕರೆತರಬೇಕವ್ವ
ಮುಹೂರ್ತ ಹತ್ತಿರ ಬಂತವ್ವ
ಸರಬರ ಸೀರೆ ಶಬ್ದವ ಕೇಳವ್ವ
ಪುರೋಹಿತರ ಮಂತ್ರದ ಅಬ್ಬರ ನೋಡವ್ವ
ಕುತ್ತಿಗೆಗೆ ತಾಳಿ ಕಟ್ಟಿಯಾನವ್ವ
ನಾಚಿಗೆ ಮುಖಕೆ ಬಂತು ನೋಡವ್ವ
ಚಂದಕೆ ಮದುಮಕ್ಕಳಹರಸಬೇಕವ್ವ
ಲಾಡು ಚಿರೋಟಿ ಊಟ ಅಯ್ತೆನವ್ವ
ಎಲೆ ಅಡಿಕೆ ವೀಳ್ಯ ಹಾಕೊಳ್ಳವ್ವ
ನೆಂಟರಿಗೆ ಕಾಫಿ ಕೊಡಬೇಕವ್ವ
ಚಂದಕೆ ಮಗಳನ್ನು ಕಳಿಸೇನವ್ವ
ಮುದ್ದಾಗಿ ಸಾಕಿದ ಮಗಳವ್ವ
ತಪ್ಪನು ಹೊಟ್ಟೆಲಿ ಹಾಕಿರವ್ವ
ಪ್ರೀತಿ ಲಿ ನೋಡಿ ಕೊಳ್ಳಿರವ್ವ
ನಿಮ್ಮ ಮನೆ ಬೆಳಗುವ ಲಕ್ಷ್ಮಿಯವ್ವ
ಪಂಕಜಾ .ಕೆ ಮುಡಿಪು
Comments
Post a Comment