ಕಾತುರ
ಆಗಸದ ಮೋಡಗಳ ನಿಟ್ಟಿಸುತ
ಮಳೆಯ ನಿರೀಕ್ಷೆಯಲಿರುವ ರೈತನಂತೆ
ನಿನ್ನ ನಿರೀಕ್ಷೆಯಲಿ ಕಾದಿರುವೆ ನಲ್ಲೆ
ಕಾದು ಕಾದು ನಾ ಸೋತೆ ನಲ್ಲೆ
ನಿರೀಕ್ಷೆಯ ತಪದಿ ಬೆಂಡಾಗಿದೆ ದೇಹ
ನಿನ್ನೊಲವ ಸವಿಯುವ ಕಾತುರದ ದಾಹ
ದುಂಬಿಗಳ ನಿರೀಕ್ಷೆಯಲಿರುವ ಹೂವಿನಂತೆ
ಕಾತುರದಿ ಕಾಯುತಿರುವೆ ನಿನಗಾಗಿ
ಬಾಂದಳದಿ ಮಿನುಗುವ ತಾರೆಗಳಂತೆ
ಇರುವೆನಿನ್ನೊಡನಾಟದ ನಿರೀಕ್ಷೆಯಲಿ
ಪ್ರೀತಿಸುರಿಸುವ ಆ ನಿನ್ನ ಕಣ್ಣ ಕಾಂತಿ
ನೊಂದ ಮನಕೆ ತುಂಬುತಿದೆ ಶಾಂತಿ
ಅಂಗಳದ ತುಂಬಾ ಅರಳಿರುವ ಹೂಗಳಂತೆ
ಕಟ್ಟಿರುವೆ ಕನಸುಗಳಹೂಮಾಲೆ
ನಿನ್ನೊಲವ ಸವಿಗಾನ ಮನಕೆ ಮುದ ತುಂಬಿ
ಬಾಳಲ್ಲಿ ತುಂಬಿತು ಸಂತಸದ ದುಂಬಿ
ಕಾಯುವಿಕೆಯ ತಪವ ನೀನೇನು ಬಲ್ಲೆ
ಕೆಂಡದ ಮಳೆಯಂತೆ ಸುಡುತಿರುವುದು ನಲ್ಲೆ
ಬಂದೆನ್ನ ಬಾಳಿಗೆ ತುಂಬು ಒಲವು
ನಿನ್ನ ಒಡನಾಟದಲ್ಲಿ ನನ್ನ ಗೆಲುವು
ಪಂಕಜಾ. ಕೆ.
Comments
Post a Comment