ಆಶೆ ಒಂದಾಶೆ
ಮಾಗಿಯ ಚಳಿಯಲ್ಲಿ ಮೈ ನಡುಗುತಿರಲು
ನಿನ್ನೊಲವ ಹೊದಿಕೆಯೊಳಗೆ ಹುದುಗುವಾಸೆ
ಬಾನಲ್ಲಿ ಹಾರುತಿಹ ಹಕ್ಕಿಗಳ ಕಂಡು
ನಿನ್ನೊಡನೆ ಬಾನೆತ್ತರ ಹಾರುವಾಸೆ
ಮಕರಂದ ಹೀರುತಿರುವ ದುಂಬಿಗಳ ಕಂಡು
ನಿನ್ನ ಅಧರಗಳ ಮಧುವ ಸವಿಯುವಾಸೆ
ಗಿಡದಲ್ಲಿ ಅರಳಿರುವ ಹೂವುಗಳ ಕಂಡು
ನಿನ್ನ ಮುಡಿಗದನು ಮುಡಿಸುವಾಸೆ
ತಾರೆಗಳನೊಡನಾಡುತಿರುವ ಚಂದಿರನ ಕಂಡು
ನಿನ್ನೊಡನೆ ಅನುದಿನವು ಸುಖಿಸುವಾಸೆ
ಬಾಳಲ್ಲಿ ತುಂಬಿರಲು ಸವಿಜೇನ ಹೊನಲು
ಸವಿಯುತ್ತಾನೀಜತೆಯಲಿದ್ದರೆ ಸಾಕೆಂಬಾಸೆ
ಪಂಕಜಾ.ಕೆ.
Comments
Post a Comment