ಕನಸು
ಕನಸುಗಳ ಕಾಣುತಹಾರಾಡುವ ಹಕ್ಕಿ
ಕತ್ತರಿಸಿದ ರೆಕ್ಕೆಗಳ ಕಂಡು ಬಿಕ್ಕಿ
ಕನಸುಗಳ ನನಸಾಗಿ ನೀನಂದು ಸಿಕ್ಕೆ
ಸಿಕ್ಕುಗಳ ಬಿಡಿಸುತ್ತ ನಾನಿಂದು ನಕ್ಕೆ
ಹೂವಿನಲಿ ಪರಿಮಳವು ತುಂಬಿರುವಂತೆ
ನನ್ನುಸಿರಿನಲ್ಲೆಲ್ಲನೀನಿರುವೆಯಂತೆ
ಹೊಸತೊಂದು ಭಾವನೆಯು ಮನದಲ್ಲಿ ತುಂಬಿ
ಇಂದೀಗ ಹಾಡುತಿದೆ ಸಂತಸದ ದುಂಬಿ
ಕಾಡುತಿಹ ಕಹಿನೆನಪುಗಳ ನೆರಳು
ಬಾಡದಿರಲಿ ನಿನ್ನೊಲವಿನ ಹರಳು
ಎಲ್ಲೆಲ್ಲೂ ತುಂಬಿರುವ ಸವಿಜೇನ ಹೊನಲು
ಬಾಳಲ್ಲಿ ತುಂಬಿರುವ ನಿನ್ನೊಲವ ಅಮಲು
ಇನಿಯ ನೀಬಂದ ಕ್ಷಣದಿಂದ ಬಾಳೆಲ್ಲ ಬೆಳಗು
ನಿನ್ನೊಲವ ಸವಿಜೇನೇ ಈ ಬಾಳಿನೊಳಗು
ಮೂಡುತಿಹೆ ಕನಸುಗಳು ಆಗಸದೆತ್ತರ
ಹೊಸತನದ ರೆಕ್ಕೆಗಳು ಬಂದೀಗ ತತ್ತರ
ಪಂಕಜಾ.ಕೆ.
Comments
Post a Comment