ನಗು
ನಗಬೇಕು ನಾವೆಲ್ಲ
ಹೂವೊಂದು ಬಿರಿದಂತೆ
ನಕ್ಕು ಒಮ್ಮೆ ನೋಡಿ
ಹೇಗಿರುವುದು ಮೋಡಿ
ಹುದುಗಿರುವ ತಲೆನೋವು
ನಕ್ಕಾಗ ಮಾಯ
ಮೈಕೈಯ ನೋವೆಲ್ಲ
ನಗುತಿರಲು ಕಾಣ
ನಗುವೊಂದು ಮಂತ್ರ
ತಿಳಿಯಬೇಕು ಅದರ ತಂತ್ರ
ಮುಖದಲ್ಲಿ ನಗುವಿರಲಿ
ಮನದಲ್ಲಿ ಖುಷಿಯಿರಲಿ
ಬಿಟ್ಟುಬಿಡಿ ಕೊಂಕು ನಗೆ
ಉರಿದೀತು ಮನ ಹಲವು ಬಗೆ
ಜೀವನದ ಜಂಜಾಟಗಳಿಗೆ
ಜೀವಜಲವೇ ನಗು
ಜೀವಿಗಳನೊಡನಾಟಕ್ಕೆ
ಬೇಕು ಸುಂದರ ನಗು
ನಗಬೇಕು ನಕ್ಕು ನಲಿಯಬೇಕು
ಮನಸು ಹಗುರವಾಗಲು ನಗಬೇಕು
ಪಂಕಜಾ.ಕೆ
Comments
Post a Comment