ಒಲವೇ ಜೀವನ
ಬಾಳೊಂದು ಭಾವಗೀತೆ
ನೀ ಬರೆದೆ ಪ್ರೇಮಗೀತೆ
ಹಾಡುತಿದೆ ಒಲವ ಗೀತೆ
ಸುತ್ತೆಲ್ಲ ತುಂಬಿರುವ ಒಲವ ರಸ
ಪ್ರೇಮ ಜ್ಯೋತಿಯ ಹೂರಣ
ತುಂಬಿದೆಬಾಳಲಿಸವಿಜೇನಹೊನಲು
ಮನಸಿಂದು ನಿನ್ನನೇ ನೆನೆದಿದೆ
ಇನಿಯ ನಿನ್ನೊಲವ ಉಣಿಸು ಬಾ
ತನಿರಸವ ಸವಿಯುತ್ತಾ ನಲಿಯುವ
ನೀ ಎನ್ನ ಜೀವನದ ಭಾಗ್ಯನಿಧಿ
ದೇವನಿತ್ತ ವರ ಈ ಸೌಭಾಗ್ಯ ನಿಧಿ
ನೀ ಎನ್ನ ಒಲವ ಜೀವನದಿ
ಒಂದಾಗಿ ಜೀವನವನ ಕಳೆಯುವ
ಒಲವಿಂದ ಜತೆಯಾಗಿಹಾಡುವ
ಸುಖ ಸಂತೋಷವ ಬಾಳಲ್ಲಿ ಸವಿಯುವ
ಪಂಕಜಾ.ಕೆ.
Comments
Post a Comment