ಸ್ವಾಭಿಮಾನದ ಹರಿಕಾರ
ಚಹಾ ಮಾರುತ್ತಿದ್ದ ಹುಡುಗನೇ
ಇಂದೀಗ ದೇಶದ ಪ್ರಧಾನಿಯಾದನೇ
ಅವರ ಆಡಳಿತದ ವೈಖರಿ
ಜಗತ್ತೇ ನೋಡುತ್ತಿದೆ ಅಚ್ಚರಿ
ರಾಜಕೀಯ ಮುತ್ಸದ್ದಿ ಈತ
ಭಾರತದಹೆಮ್ಮೆಯ ಪುತ್ರ ಈತ
ಜಗದಗಲ ಭಾರತ ಕೀರ್ತಿಯು ಹಬ್ಬಿ
ಇಂದೀಗ ಭಾರತ ಮಾತೆ ಉಬ್ಬಿ
ಭಯೋತ್ಪಾದನೆಗಳು ಕುಗ್ಗಿ
ಅಭಿವೃದ್ಧಿಯತ್ತ ಭಾರತ ನುಗ್ಗಿ
ದೊಡ್ಡಣ್ಣನಿಗೆ ಕೊಟ್ಟರು ಗುದ್ದು
ಸ್ವಾಭಿಮಾನದಿ ಬದುಕನ್ನು ಗೆದ್ದು
ಸ್ವಾಭಿಮಾನದ ಬಾವುಟವ ಏರಿಸಿ
ಭಾರತಾಂಬೆಗೆ ಹಿರಿಮೆಯ ಗರಿ ತೊಡಿಸಿ
ಮೆರೆದ ನಮ್ಮೆಲ್ಲರ ನೆಚ್ಚಿನ ಪ್ರಧಾನಿ
ಆತನೇ ಜಗಮೆಚ್ಚಿದ ನರೇಂದ್ರ ಮೋದಿ
ಭಾರತ ಕಂಡ ಮಹಾನ್ ನಾಯಕ
ಹಾರಿಸುವನು ಭಾರತದ ಕೀರ್ತಿ ಪತಾಕೆ
ಬದುಕಿದರೆ ಇವರಂತೆ ಬದುಕಬೇಕು
ಸ್ವಾಭಿಮಾನ ತುಂಬಿ ನಡೆಯಬೇಕು
ತನಗಾಗಿ ಏನನ್ನೂ ಬಯಸದ ಸಂತ
ತಾಯ್ನಾಡಿನ ಏಳಿಗೆಯೇ ಇವರ ಮಂತ್ರ
ಸ್ವಾಭಿಮಾನದ. ಹರಿಕಾರ
ಜಗತ್ತೇ ಹಾಕುತ್ತಿದೆ ಇವರಿಗೆ ಜೈಕಾರ
ಪಂಕಜಾ.ಕೆ. ಮುಡಿಪು
Comments
Post a Comment