ಬೆಳ್ಳಿಯ ತಟ್ಟೆ
ಬಾನಲಿ ಹೊಳೆಯುವ ಬೆಳ್ಳಿಯ ರೇಖೆ
ದಿನ ದಿನ ಬೆಳೆಯುವ ಬೆಳ್ಳಿಯ ರೇಖೆ
ಹುಣ್ಣಿಮೆ ದಿನದಲಿಹೊಳೆಯುವ ತಟ್ಟೆ
ನಮ್ಮಯ ಜತೆಯಲಿ ಬರುತಿಹ ತಟ್ಟೆ
ಹಾಲಿನ ಬೆಳಕನು ಧರೆಯಲ್ಲಿ ತುಂಬಿ
ಮೈ ಮನಸಿಗೆ ತಂಪಿನ ಕಂಪನು ತುಂಬಿ
ತಾರೆಗಳೊಡನಾಡುತನಲಿಯುವ ಚಂದ
ಕೊಳದಲಿ ಅರಳುವ ನೈದಿಲೆ ಅಂದ
ಮೋಡದಮರೆಯಲಿಮುಖವನು ಮರೆಸಿ
ದಿನ ದಿನ ಕರಗುತ ಬಾನಲಿ ಚಲಿಸಿ
ಕತ್ತಲೆ ರಾತ್ರಿಯ ಧರೆಯಲ್ಲಿ ತುಂಬಿ
ವಿರಹದ ನೋವನು ಮನದಲಿ ತುಂಬಿ
ತೆರಳಿದ ಕಾಣದ ಲೋಕಕೆ ಇಂದು
ಹರಡಿತು ಬುವಿಯಲಿ ಕತ್ತಲು ಇಂದು
ಪಂಕಜಾ.ಕೆ
Comments
Post a Comment