ಕಪ್ಪು ಮೋಡ
ಕಪ್ಪು ಮೋಡದ ದಂಡು ತುಂಬಿ
ಬುವಿ ಯಲಿ ತುಂಬಿತು ಕತ್ತಲೆ
ರವಿಯು ಮೋಡದ ಮರೆಯಲಿ
ಮುಖವ ಮರೆಸುತ ಓಡಿದ
ಮಿಂಚು ಗುಡಿಗಿನ ಆರ್ಭಟ
ವರುಣ ಬಂದನು ಓಡುತಾ
ಬುವಿಯು ಕುಣಿದಳು ಹರ್ಷದಿ
ತೊನೆದು ನಲಿದಳು ಮಳೆಯಲಿ
ಕಾದ ಬುವಿಗೆ ತಂಪು ತಂತು
ಮುನಿಸು ಬಿಟ್ಟ ನಲ್ಲೆಯ ತೆರದಲಿ
ಜೀವ ಕೋಟಿಗೆ ಗೆಲುವು ತಂತು
ಮನಕೆ ಮುದವನು ತುಂಬಿತು
ಚಿಗುರು ಹೂವು ತುಂಬಿ ತುಳುಕಿ
ಕಣ್ಣು ಮನವನು ತುಂಬಿತು
ಕಪ್ಪು ಮೋಡದ ದಂಡು ಕರಗಿ
ಮಳೆಯ ಸುರಿಸುತ ಬಳಲಿತು
ಪಂಕಜಾ.ಕೆ.
Comments
Post a Comment