ಗಜಲ್
ಬಾಳಿನ ನಡೆಗೆ ನುಡಿಗಳಲಿರಲು ಹೊಸತನ
ದಿನದ ಚಲನೆಗೆ ಸುಗಮ ಸಂಭ್ರಮಿಸಲು ಹೊಸತನ
ಅನುಭವದ ಹೆಜ್ಜೆಗೆ ಸರಿದಾರಿಯಿರಬೇಕು
ಹೂವು ಹಣ್ಣುಗಳು ಹಿಂದು ಮುಂದಿರಲು ಹೊಸತನ
ಇನಿಯನೊಡನಾಟದಲಿ ಸುಖಿಸುವ ಮನಸು
ತೆರೆದ ಕಿಟಕಿಯಲಿ ಚಂದಿರ ಇಣುಕಲು ಹೊಸತನ
ಅಚ್ಚರಿಯ ಬೆಳವಣಿಗೆಗಳು ನಿರಂತರವಿಲ್ಲಿ
ನೋಡುವ ದೃಷ್ಟಿ ಹಾಡುವ ಹಾಡಿನಲ್ಲಿರಲು ಹೊಸತನ
ಪ್ರಕೃತಿಯೊಡನಾಟದಿ ನೆಮ್ಮದಿಯ ಘಳಿಗೆಗಳು
ಪಂಕಜಾಳ ಮನದಲ್ಲಿ ತುಂಬಿರಲು ಹೊಸತನ
ಪಂಕಜಾ .ಕೆ.
Comments
Post a Comment