ಗಜಲ್
ಅರಳಿರುವ ಹೂವುಗಳ ಕಂಡಾಗ ಖುಷಿ ಪಡಬಾರದೇನು
ಬಾನಿನಲಿ ಹಾರಾಡುವ ಹಕ್ಕಿಗಳ ಕಂಡಾಗ ಖುಷಿಪಡಬಾರದೇನು
ಕಷ್ಟಗಳ ಸರಮಾಲೆ ಯಲಿ ಮುಳುಗಿ ಬಸವಳಿಯುತಿರಲು
ನರ್ತಿಸುವ ನವಿಲುಗಳ ಕಂಡಾಗ ಖುಷಿಪಡಬಾರದೇನು
ಜೀವನದಲ್ಲಿ ಬರುವ ಕಷ್ಟ ನಷ್ಟಗಳಿಗೆ ಎದೆಗುಂದದೆ
ಮೂಡುತಿರುವ ಸೂರ್ಯನ ಕಿರಣಗಳ ಕಂಡಾಗ ಖುಷಿಪಡಬಾರದೇನು
ಎಲ್ಲೆಲ್ಲೂ ಕಸದ ತ್ಯಾಜ್ಯಗಳೇ ತುಂಬಿರುವಾಗ
ಹಸಿರು ತುಂಬಿದ ಕಾಡುಗಳ ಕಂಡಾಗ ಖುಷಿಪಡಬಾರದೇನು
ಪಂಕಜಾಳ ಮನದಲ್ಲಿರಲು ನೂರಾರು ನೋವುಗಳು
ಪ್ರಕೃತಿಯಲ್ಲಿ ನಲಿವ ಜೀವಿಗಳ ಕಂಡಾಗ ಖುಷಿಪಡಬಾರದೇನು
ಪಂಕಜಾ.ಕೆ
Comments
Post a Comment