ಗಜಲ್
ಕಷ್ಟಗಳು ಬಂದಾಗ ನಗುತಿರಲು ಯಾರೇನು ಮಾಡುವರು
ಎದುರಿಸುವಛಲಮನದಲ್ಲಿರಲು ಯಾರೇನು ಮಾಡುವರು
ಜೀವನವೊಂದು ಸುಖ ದುಃಖ ಗಳ ಸಂತೆ
ಮನಸುಖುಷಿಯಿಂದತುಂಬಿರಲುಯಾರೇನುಮಾಡುವರು
ಎಲ್ಲೆಮೀರಿದ ನಡತೆ ದುಃಖಕ್ಕೆ ಕಾರಣವೆಂದು
ತಿಳಿದೂ ಮೈ ಮರೆಯುತಿರಲು ಯಾರೇನುಮಾಡುವರು
ಮಕ್ಕಳಿದ್ದರೂ ವೃದ್ಧಾಶ್ರಮದಲ್ಲಿ ದಿನಕಳೆಯುತಿರುವಾಗ
ಮನಸು ಬೇಸರದ ಕಡಲಾಗಿರಲುಯಾರೇನು ಮಾಡುವರು
ಪಂಕಜಾಳ ನಡೆ ನುಡಿಗಳಲಿ ಕಳಂಕವಿಲ್ಲದಿದ್ದರೂ
ಚುಚ್ಚು ನುಡಿಗಳಿಂದ ಕುಟುಕುತಿರಲು ಯಾರೇನು ಮಾಡುವರು
.ಪಂಕಜಾ.ಕೆ
Comments
Post a Comment