ಗಜಲ್ 7
ನಿನ್ನೊಡನಾಟದ ದಿನಗಳಿಲ್ಲದೆ ಬಾಳು ಬರಡು
ಹೂಮನದಲ್ಲಿ ಒಲವಿಲ್ಲದೆ ಬಾಳು ಬರಡು
ಜೀವನದಲ್ಲಿ ಇರಬೇಕು ಒಲವು
ನೀ ಜತೆಯಲಿಲ್ಲದೆ ಬಾಳು ಬರಡು
ಹೂತೋಟದಲಿ ಅರಳಿದೆ ಹೂಗಳು
ಒಡತಿಯ ಆರೈಕೆಯಿಲ್ಲದೆ ಬಾಳುಬರಡು
ಕಮಲದಳಗಳು ಅರಳಿನಿಂತಿದೆ ಸೊಗದಲಿ
ಸೊಗಸ ಸವಿಯಲು ನೀನಿಲ್ಲದೆ ಬಾಳುಬರಡು
ಪಂಕಜಾಳಮನದಲ್ಲಿತುಂಬಿರುವಒಲವು
ಸವಿಯಲು ನೀ ಬರದೆ ಬಾಳು ಬರಡು
ಪಂಕಜಾ.ಕೆ.
Comments
Post a Comment