ಗಜಲ್. 19 ಖರ್ಚಿದೆಯೇನು
ನಗು ನಗುತ್ತಾ ಬಾಳಲು ಖರ್ಚಿದೆಯೇನು
ಪ್ರೀತಿ ವಿಶ್ವಾಸದಿಂದ ಇರಲು ಖರ್ಚಿದೆಯೇನು
ಮನುಜ ಮನುಜರಲ್ಲಿ ದ್ವೇಷವೇಕೆ
ಸೌಹಾರ್ದದಿಂದ ಜೀವಿಸಲು ಖರ್ಚಿದೆಯೇನು
ಜಗಳ ಕದನಗಳಿಂದ ಸುಖವಿರದು ಕೇಳು
ಹೊಂದಾಣಿಕೆ ನಮ್ಮಲ್ಲಿ ತರಲು ಖರ್ಚಿದೆಯೇನು
ಜೀವನದಲ್ಲಿ ಬರಬಹುದು ನೂರಾರು ಕಷ್ಟನಷ್ಟ
ಎದುರಿಸಿ ಧೈರ್ಯದಿ ನಿಲ್ಲಲು ಖರ್ಚಿದೆಯೇನು
ಎಲ್ಲೆಲ್ಲೂ ಮೋಸ ವಂಚನೆಗಳೇ ತುಂಬಿಹುದು
ಪಂಕಜಾ ಜಾಗ್ರತೆ ಕಲಿಯಲು ಖರ್ಚಿದೆಯೇನು
ಪಂಕಜಾ.ಕೆ.
Comments
Post a Comment