ಗಜಲ್
ಬಾನಿನಲಿ ಮೂಡುವ ಚುಕ್ಕಿಗಳಲ್ಲಿ ಬೆಳಕು
ಮನದಲಿ ಬರುವ ಭಾವನೆಗಳಲ್ಲಿ ಬೆಳಕು
ಹೂವೊಂದು ಬಿರಿದರಳಿ ನಗುತಿಹುದು
ಚೆಲುವನು ಕಾಣುವ ಕಣ್ಣುಗಳಲ್ಲಿ ಬೆಳಕು
ದುಂಬಿಗಳ ಹಾರಾಟದ ಸೆಳೆವ ಸೊಬಗು
ಹರುಷ ತುಂಬಿರುವ ಮನದಲ್ಲಿ ಬೆಳಕು
ಆಗಸದಿ ಹಾರಾಡುವ ಹಕ್ಕಿಗಳ ದಂಡು
ಕಂಡೆ ಕಲವರದ ಸಂಭ್ರಮದಲ್ಲಿ ಬೆಳಕು
ಮಳೆ ಬಂದು ತುಂಬಿಹುದು ಕೆರೆಕಟ್ಟೆಗಳು
ಮೂಡಿದೆ ಪಂಕಜಾಳ ಬಾಳಿನಲ್ಲಿ ಬೆಳಕು
ಪಂಕಜಾ. ಕೆ.
Comments
Post a Comment