ಸ್ವಚ್ಛಂದ ಬದುಕು
ಪೇಟೆ ಮನೆಗಳಲ್ಲಿ ತುಂಬಿದೆ ಸಿಡುಕು
ಸಿಗಬಹುದೇ ಹಳ್ಳಿಯ ಸ್ವಚ್ಛಂದ ಬದುಕು
ಸೂರ್ಯನುದಯಿಸುವಆಗಸದ ಚಂದ
ಜನರಿಗಿದೆಯೇ ಬಿಡುವು ಸವಿಯುವ ಅಂದ
ಗುಡ್ಡಬೆಟ್ಟಗಳಿಂದ ಬರುವ ತಂಪು ಗಾಳಿ
ಸಮನಾದೀತೆಪೇಟೆಯ ಪಂಖದ ಗಾಳಿ
ಗುಬ್ಬಿಗೂಡಿನಂತ ಗಗನಚುಂಬಿ ಮನೆ
ಹಾಕಬೇಕು ಅದರಲ್ಲಿ ಸವರಣೆಯ ಮಣೆ
ಎಲ್ಲೆಂದರಲ್ಲಿ ತುಂಬಿರುವ ಕಸದ ತ್ಯಾಜ್ಯ
ಮನೆ ಮನೆಗಳಲ್ಲಿ ನಿತ್ಯವೂ ವ್ಯಾಜ್ಯ
ಮಾರ್ಗವಿಡೀ ವಾಹನಗಳ ದಟ್ಟಣೆ
ಎಲ್ಲೆಲ್ಲೂ ಕಾಣುವ ಜನದಟ್ಟಣೆ
ಸ್ವಚ್ಛಂದ ಗಾಳಿಯಲಿ ವಿಹರಿಸುವ ಆನಂದ
ತಿಳಿಯುವುದೇ ಅವರಿಗೆ ಅದರ ಬಂದ
ಸ್ವಚ್ಛಂದ ಬದುಕಿನಲ್ಲಿ ಇರುವ ಆನಂದ
ಸವಿದವನಿಗೆ ಗೊತ್ತು ಅದರ ಚಂದ
ಮರಗಿಡಗಳ ಬೆಳೆಸಿ ಉಳಿಸಬೇಕು
ಸ್ವಚ್ಛಂದ ಗಾಳಿ ಸವಿಯು ಸವಿಯಬೇಕು
ಪಂಕಜಾ.ಕೆ
Comments
Post a Comment