ದೇವ ಸೃಷ್ಟಿ
ಓ ದೇವಾ ನೀ ಸೃಷ್ಟಿ ಸಿದ ತಾಣವೂ
ಕಣ್ಮನ ತಣಿಯುವ ನೋಟವೂ
ನಾನಂದು ನಿನ್ನಕಂಡಾಗಲೊಮ್ಮೆ
ಮನಸೆಲ್ಲಾ ಖುಷಿಯಾಯಿತು ಓ ದೇವಾ
ಬುವಿಯಲ್ಲಿ ತುಂಬಿರುವ ಸೌಂದರ್ಯವನು ಕಂಡು
ಬೆರಗಾದೆ ನಾ ಇಂದಿಗೂ ಓ ದೇವಾ
ತರ ತರದ ಹೂಗಳು ಬಗೆಬಗೆಯಹಕ್ಕಿಗಳು
ವೈವಿಧ್ಯತೆಯವೈಭವಾಓ ದೇವಾ
ಬಾನಲ್ಲಿ ಹರಡಿರುವ ಬಿಳಿ ಮುಗಿಲಿನಂತೆ
ಮನಸಲ್ಲಿ ಖುಷಿ ತುಂಬಿತು ಓದೇವಾ
ಬಾನಲ್ಲಿತುಂಬಿರುವ ಬಿಳಿ ಚುಕ್ಕೆಗಳ ಅಂದ
ಶಶಿಕಿರಣದಾ ತಂಪು ಮೈಮರೆಸಿತು ಓ ದೇವಾ
ಮೈತುಂಬ ಹೂ ಹಣ್ಣುಗಳ ತುಂಬಿ
ತೊನೆದಾಡುತ್ತಿದೆ ಈ ಪ್ರಕೃತಿ ಓ ದೇವಾ
ಎಲ್ಲೆಲ್ಲೂ ತುಂಬಿರುವ ಸೌಂದರ್ಯ ಸವಿಯುತ್ತಾ
ಮನಸೆಲ್ಲಾ ಹಗುರಾಯಿತು ಓ ದೇವಾ
ಪಂಕಜಾ.ಕೆ ಮುಡಿಪು
Comments
Post a Comment