ಬಾಳೊಂದು ಹೂಬನ
ಬಾಳೊಂದು ನಂದನವನ
ಬೆಳೆಸಬೇಕದರಲ್ಲಿ ಹೂಬನ
ಕಷ್ಟ ದುಃಖಗಳ ಸಹಿಸುತ
ನೋವುನಲಿವುಗಳಲಿತೇಲುತ
ನಗುತ ನಗಿಸುತಿರಲು ಬಾಳು
ರುಚಿಯಾದ ಹಣ್ಣಿನ ಹೋಳು
ಜೀವನವೊಂದು ಜಂಜಾಟ
ಇರಲಿ ಅದರಲ್ಲಿ ನಗುವಿನಾಟ
ಸಮರಸವು ತುಂಬಿದ ಜೀವನ
ಮಧು ತುಂಬಿದಹೂಗಳ ಕಾನನ
ಬಾಳಿನಲಿಹರಡಲಿನಗುವೆಂಬಜ್ಯೋತಿ
ನಗುಹಂಚಿಎಲ್ಲರೊಡನಾಡಿದರೆ ಖ್ಯಾತಿ
ಪಂಕಜಾ.ಕೆ. ಮುಡಿಪು
Comments
Post a Comment