ಹೆಣ್ಣು ಗಂಡಿನ ಸ್ನೇಹ
ಕೂಡಿ ಆಡಿದೆವು
ನಾವು ಬಾಲ್ಯದಿಂದ
ಒಟ್ಟಾಗಿ ಕುಣಿದೆವು
ಜತೆಯಾಗಿ ನಲಿದೆವು
ಅಕ್ಕ ತಂಗಿಯರಲ್ಲಿ
ಅಣ್ಣ ತಮ್ಮಂದಿರಲ್ಲಿ
ಕೊನೆಗೆಹೆತ್ತಬ್ಬೆಅಪ್ಪನಲ್ಲೂ
ಹೇಳಲಾರದ ವಿಷಯ
ಹಂಚಿಕೊಡೆವು ನಾವು
ಅದನು. ದಿನ ದಿನವೂ
ನಕ್ಕು ನಲಿದೆವು ಒಂದಾಗಿ
ಹೆಣ್ಣುಗಂಡೆನ್ನುವಭೇದವಿಲ್ಲದೆ
ನಮ್ಮ ಸ್ನೇಹದ ಬಳ್ಳಿ
ಹಬ್ಬಿ ಹೆಮ್ಮರವಾಗಿ
ಶುದ್ಧ ಸ್ನೇಹದ ಬಳ್ಳಿ
ಎಲ್ಲೆಡೆಯೂ ಹಬ್ಬಿತಂದು
ಕಲ್ಮಶವು ಇನಿತೂ ಇಲ್ಲ
ನನ್ನ ನಿನ್ನ ಮನದಲಿ
ತುಂಬಿತ್ತು ಅಲ್ಲೆಲ್ಲ
ಶುದ್ಧ ಸ್ನೇಹದ ಜಲ
ಇಂದೀಗ ನಾವು ಬೆಳೆದೆವು
ಜಗವು ನೋಡಿತು ನಮ್ಮನು
ಅರಸಿನ ಬೆರೆತ ಕಣ್ಣಿಂದ
ಶುದ್ಧ ಸ್ನೇಹದ ಜಲಕೆ
ಹುಳಿಯ ನಿಂಡಿದರು
ಬಾಲ್ಯದಲಿಲ್ಲದಹೆಣ್ಣುಗಂಡೆನ್ನುವ
ಭೇದ ಬಾವಈಗೇಕೆ ಬಂತೋ
ಮತ್ತೆ ಬಂದೀತೇ ಆ ಬಾಲ್ಯ
ಇನ್ನೊಮ್ಮೆ ನಾವು ಕೂಡಿ ಆಡುವ ಕಾಲ
ಹಂಗಿಲ್ಲದ ಚಿಂತೆಗಳಿಲ್ಲದ ಆ ಬಾಲ್ಯ
ಪಂಕಜಾ.ಕೆ.
Comments
Post a Comment