ಗಜಲ್. 9
ಶಿವರಾತ್ರಿಯ ದಿನವಿದು ಪೂಜಿಸಬೇಕಲ್ಲ ಶಿವನ
ಭಜನೆಧ್ಯಾನವ ಮಾಡಿ ಪಡೆಯಬಹುದಲ್ಲ ಶಿವನ
ಜಾಗರಣೆ ಉಪವಾಸ ಮಾಡಿದರೆ ಸಾಕೇನು
ಭಕ್ತಿಯಿಂದ ಅರ್ಚಿಸಿ ನಮಿಸಬೇಕಲ್ಲ ಶಿವನ
ಹಸಿದವನಿಗೆ ಸಿಗದ ಅನ್ನವಿದ್ದೇನು ಫಲ
ಹೃದಯವಂತನಲಿ ಕಾಣಬಹುದಲ್ಲ ಶಿವನ
ವ್ರತ ಉಪವಾಸ ಮಾಡಲೇ ಬೇಕೇನು
ಮನಶುದ್ದಿಯಿದ್ದರೆ ನೋಡಬಹುದಲ್ಲ ಶಿವನ
ಅರ್ಚಿಸಲು ಯಾವ ಹೂವಾದರೇನು
ಪಂಕಜಾ ಭಕ್ತಿಯಲಿ ಒಲಿಸಬಹುದಲ್ಲ ಶಿವನ
ಪಂಕಜಾ.ಕೆ. ಮುಡಿಪು
Comments
Post a Comment