ಗುಬ್ಬಿ ಹಕ್ಕಿ
ಗುಬ್ಬಿಯೊಂದು ಹಾರಿ ಬಂದು ಮಾಡಮೇಲೆ ಕುಳಿತಿತು
ಅತ್ತ ಇತ್ತ ಕತ್ತು ತಿರುಗಿಸಿ ಸುತ್ತ ಮುತ್ತ ನೋಡಿತು
ಗೂಡುಕಟ್ಟಲದಕೆ ಜಾಗ ಎಲ್ಲಿಯೂ ಇಲ್ಲವೆಂದು ಕಂಡಿತು
ಮುಳಿಹುಲ್ಲ ಮಾಡು ಈಗ ಹುಡುಕಿದರೂಅದಕೆ ಸಿಕ್ಕಲಿಲ್ಲವೂ
ಗೋಡೆಯಲ್ಲಿ ಪಟಗಳೊಂದು ಕಾಣಲಿಲ್ಲವೆಲ್ಲಿಯೂ
ಬಿರುಬಿಸಿಲು ಮೈಯ ಸುಡಲು ಗೂಡು ಎಲ್ಲಿ ಕಟ್ಟಲಿ
ಅಂದಿನಿಂದ ಇದ್ದ ಸ್ನೇಹಸೇತು ಎಲ್ಲಿ ಕಡಿದು ಹೋಯಿತೋ
ಮನೆಯ ಮಾಡಲೆಲ್ಲಿಯೂ ಜಾಗವಿಲ್ಲದಾಯಿತೇ
ಇನ್ನು ನಾನು ಹೇಗೆ ಇರಲಿ ನಿನ್ನ ಮನೆಯಲೆಂದಿಗೂ
ಎನುತ ಗುಬ್ಬಿ ದುಃಖದಿಂದ ಅಳುತ ಹಾರಿ ಹೋಯಿತು
ಗುಬ್ಬಿ ಹಕ್ಕಿ ಈಗ ಚಿತ್ರಪಟದಲ್ಲಿ ಮಾತ್ರ ಕಾಣುವಂತೆ ಆಯಿತು
ಎಂತ ಚಂದ ಮುದ್ದು ಹಕ್ಕಿ ಪುಟ್ಟ ಪುಟ್ಟ ಹಕ್ಕಿಯು
ಇನ್ನು ಮೇಲೆ ಕಾಣದಲ್ಲ ತುಂಬಾ ದುಃಖವಾಗುವುದು
ಹೇಗೆ ಉಳಿಸಲದನು ನಾವು ನಮ್ಮ ಜತೆಯಲೆಂದಿಗೂ
ಪಂಕಜಾ.ಕೆ.
Comments
Post a Comment