ಹೋಳಿ ಹಬ್ಬ
ಶಿಶಿರನು ತೆರಳುವ ಹೊತ್ತು
ವಸಂತನಾಗಮನದ ಹೊತ್ತು
ಪೂರ್ಣ ಚಂದ್ರನುಬರುವ ಹೊತ್ತು
ಹೋಳಿ ಹಬ್ಬದ ಸಂಭ್ರಮದ ಹೊತ್ತು
ರಂಗು ರಂಗುಗಳ ಹಬ್ಬಹೋಳಿ
ಎಲ್ಲೆಲ್ಲೂ ರಂಗಿನೋಕುಳಿ
ಹೋಳಿ ಹುಣ್ಣಿಮೆಯ ಗೌಜು
ಓಕುಳಿಯಾಟದ ಮೋಜು
ಬಾನಲಿ ಪೂರ್ಣಚಂದ್ರನ ಸೊಬಗು
ಮನದಲಿ ಓಕುಳಿಯಾಟದ ಬೆರಗು
ಎಳೆಬಿಸಿಲಿಗೆ ಮರಗಿಡಗಳಲ್ಲಿ ಚಿಗುರು
ಪ್ರಕೃತಿಯಮಡಿಲಲ್ಲಿಜೀವ ಜಂತುಗಳಉಸಿರು
ಏಕತಾನತೆ ಕಳೆದುಮನಕೆ ರಂಗುತುಂಬಿ
ಪ್ರೀತಿ ಪ್ರೇಮದ ಭಾವವನು ತುಂಬಿ
ಸ್ನೇಹ ಬಾಂಧವ್ಯದವೃದ್ಧಿಸುವ ಹಬ್ಬನೋಡಿ
ನಲಿಯೋಣಬಣ್ಣದೋಕುಳಿಯಾಡಿ
ಪಂಕಜಾ .ಕೆ. ಮುಡಿಪು
Comments
Post a Comment