ಅಭಿನಂದನೆ
ಅಭಿನಂದನಾ ನಿನಗೆ ಅಭಿನಂದನೆ
ವೈರಿಯ ಬಂಧನದಲ್ಲಿದ್ದರೂ ಧೃತಿಗೆಡದೆ
ಹಿಂಸೆಯ ಸಹಿಸುತ ಗುಟ್ಟನು ಬಿಡದೆ
ಶತ್ರುಗಳ ಸದೆಬಡಿದು ಸೆರೆಯಾದೆ
ಕರ್ತವ್ಯವೇ ಉಸಿರೆನುತ ಉಳಿಸಿದೆ
ಭಾರತ ಕೀರ್ತಿಯ ಎದೆಗುಂದದೆ
ಭಾರತದ ಶೂರ ವೀರ ಯೋಧನೆ
ಸಲ್ಲಿಸುವೆ ನಿಮಗೆ ನಮ್ಮ ವಂದನೆ
ಧನ್ಯವಾಯಿತು ತಾಯ್ನಾಡು ಇಂದು
ನಿನ್ನಂತಹ ವೀರ ಪುತ್ರನ ಪಡೆದು
ಸಾಧಿಸಿ ತೋರಿಸಿದೆ ನಿನ್ನ ಕ್ಷಾತ್ರ ತೇಜ
ಉಳಿಸಿದೆ ಭಾರತದ ಕೀರ್ತಿಯನು ವೀರತೇಜ
ಭಾರತದ ಹೆಮ್ಮೆಯ ಪುತ್ರ
ನಿನ್ನ ಹೆತ್ತವರು ವಂದ್ಯ ಸರ್ವತ್ರ
ತಾಯ್ನಾಡಿಗಾಗಿ ಕಷ್ಟ ಸಹಿಸಿದ ಯೋಧನೆ
ಸಲ್ಲಿಸುವೆ ನಿಮಗೆ ನಮ್ಮ ಅಭಿನಂದನೆ
ಪಂಕಜಾ.ಕೆ. ಮುಡಿಪು
Comments
Post a Comment