ಸಮಚಿತ್ತ
ಸೋಲು ಗೆಲುವುಗಳುಂಟು
ನೋವು ನಲಿವುಗಳುಂಟು
ಬಾಳ ಪಯಣದಲಿ
ಸೋಲು ಬಂತೆಂದು ಕುಗ್ಗದೆ
ಗೆಲುವು ಬಂತೆಂದು ಹಿಗ್ಗದೆ
ಸಮಚಿತ್ತತೆ ಯಿರಲಿ ಚಿತ್ತ
ದೇವ ಕೊಟ್ಟಿಹ ಬಾಳು
ಹಾಳುಗೆಡವಿದರೆ ಗೋಳು
ಬಾಳಿನಲಿ ಬರಬಹುದು ಕಷ್ಟ ನಷ್ಟ
ಸಮಚಿತ್ತದಿಂದ ಸ್ವೀಕರಿಸದಿರೆ ನಷ್ಟ
ಬಾಳಿನಲ್ಲಿ ಬರುವ ಸುಖದುಃಖ ಗಳ
ಸಮಚಿತ್ತದಿಂದ ಸ್ವೀಕರಿಸಿ
ಸಾಧನೆಯಮಾಡಿದರೆಬಂದೀತು ಕೀರ್ತಿ
ಕೀರ್ತಿ ಅಪಕೀರ್ತಿಗಳ
ಬೆನ್ನೇರದೆ ಕಾಯಕವ ಮಾಡುತ್ತ
ಜೀವಿಗಳಿ ಗೊಳಿತಾಗುವಂತೆ
ಬದುಕಿ ಬಾಳಿದರೆ ಜೀವನ ಸಾರ್ಥಕ್ಯ
ಪಂಕಜಾ.ಕೆ.
Comments
Post a Comment