ಹರೆಯ
ಹರೆಯದಲ್ಲಿ ಹಕ್ಕಿಯಂತೆ ಆಗಸದಲಿ ರೆಕ್ಕೆ ಬಿಚ್ಚಿ ಹಾರುವ ಮನಸು
ಗರಿಗೆದರಿದ ಆಶೆಗಳು ಬಾನೆತ್ತರ ಏರಿ ಕುಳಿತು ನಲಿದ ಕನಸು
ಬೇಡನ ಬಲೆಯೊಳಗೆ ಸಿಕ್ಕಿ ರೆಕ್ಕೆಮುರಿದ ಹಕ್ಕಿಯಂತಾಗದಿರಲಿ ಬಾಳು
ಕನಸುಗಳ ಬೆನ್ನೇರಿ ಹಾರುವ ಮನಸಿಗೆ ಕಡಿವಾಣ ಹಾಕದಿದ್ದರೆ ಬಾಳುಗೋಳು
ಕಾಯುತಿರುವರು ದುಷ್ಟರು ರೆಕ್ಕೆಗಳ ಕೆಡವಲು
ಅರಿಯಬೇಕು ಮನುಜರ.ಭಾವನೆಗಳ ತೆವಲು
ಆಗಸದಲ್ಲಿ ಹಾರುವ ಕನಸುಗಳ ಭರದಲ್ಲಿ
ದೇವ ಕೊಟ್ಟಿರುವ ಈ ಬಾಳು ಹಾಳಾಗದಿರಲಿ
ಪಂಕಜಾ.ಕೆ. ಮುಡಿಪು
Comments
Post a Comment