ನೆನಪಿನೋಲೆ
ಬೆಳದಿಂಗಳ ರಾತ್ರಿಯಲಿ ತಂಗಾಳಿ ಬೀಸುತ್ತಿರಲು
ಮನದಲ್ಲಿ ನಿನ್ನ ನೆನಪು ತರುತಿದೆ ಒಲವ ಕಂಪು
ನೈದಿಲೆಯ ಅರಳುವಿಕೆಯಲೂ ನಿನ್ನದೇ ನೆನಪು
ರಾತ್ರಿರಾಣಿಯ ಕಂಪಲೂ ತುಂಬಿದೆ ನೆನಪು
ನೆನಪುಗಳ ಸರಮಾಲೆ ತುಂಬುತಿದೆ
ಮನವು ನಿನ್ನೊಡನಾಟವ ಬಯಸಿದೆ
ನಿನ್ನಮೊಗದಲಿ ತುಂಬಿದ ಕಾಂತಿ
ಚಂದಿರನ ನಾಚಿಸುವ ಶಾಂತಿ
ನನ್ನ ಕಣ್ಣಲಿ ಸುರಿವ ಒಲವ ಧಾರೆ
ಮೀಯುತಿರಲದರಲ್ಲಿ ಬಾರೇ
ನಿನ್ನೊಡನಾಟದಲಿಹಕ್ಕಿಯಾಗುತ್ತಿದೆ ಮನ
ಜೋಡಿ ಹಕ್ಕಿಗಳಂತೆಕೂಡಿ ಆಡೋಣವೆನುತಿದೆಮನ
ಪಂಕಜಾ.ಕೆ. ಮುಡಿಪು
Comments
Post a Comment