ಹೊಸವರ್ಷಕೆ ಸ್ವಾಗತ
ಹೊಸವರ್ಷದಾಗಮನಕೆ ವರುಣನ ಸ್ವಾಗತ
ಬೀಸುಗಾಳಿಯ ಜತೆ ಮಳೆಯ ಸಿಂಚನ
ಬಿರುಬಿಸಿಲಿಗೆ ಬಳಲಿ ಬೆಂಡಾದ ಇಳೆಗೆ
ಹನಿ ಮಳೆಯ ತಂಪು ಕಂಪಿನ ನೀರ ಜಳಕ
ಹೊಸಮಣ್ಣಿನ ಪರಿಮಳವು ಎಲ್ಲೆಡೆ ಹಬ್ಬಿ
ಮಣ್ಣಿನಡಿಯಲ್ಲಿ ಅವಿತಿದ್ದ ಬೀಜಗಳುಉಬ್ಬಿ
ಯುಗಾದಿಯಶುಭದಿನಕೆಸ್ವಾಗತವಕೋರಿ
ಚಿಗುರು ಹೂವು ಹಣ್ಣು ಹೊತ್ತು ನಲಿಯುತ್ತಿದೆ ಪ್ರಕೃತಿ
ಪಂಕಜಾ.ಕೆ.
Comments
Post a Comment