ಪುಸ್ತಕದಿನ
ಪುಸ್ತಕವೆನ್ನುವ ಜ್ಞಾನದ ಭಂಡಾರ
ಅರಿತಷ್ಟು ಮುಗಿಯದ ಸಪ್ತಸಾಗರ
ಜ್ಞಾನದ ಜ್ಯೋತಿಯ ಬೆಳಗಿಸುತ
ಸುಜ್ಞಾನದ ಬೆಳಕನು ಚೆಲ್ಲುವುದು
ಪುಸ್ತಕವೆಂಬ ಹೊತ್ತಗೆ ಹಲವು
ಪುಸ್ತಕ ಪ್ರೀತಿಯ ಬೆಳೆಸುವ ನಾವು
ಪುಸ್ತಕ ವೆನ್ನುವ ಹೊತ್ತಗೆ ಇರಲು
ಒಂಟಿತನದ ಭಯವೆಲ್ಲಿ
ಅಂತರ್ಜಾಲವ ತೆರೆದರೆ ಸಾಕು
ಸಿಗುವುದು ಪುಸ್ತಕ ಹಲವಾರು
ನಿತ್ಯವೂ ಓದುತ ಬೆಳೆಸುವ ಜ್ಞಾನವ
ಅರಿಯುತ ಹೊಸ ಹೊಸ ವಿಷಯಗಳ
ಪುಸ್ತಕ ದಿನದಲಿ ಪುಸ್ತಕ ಓದುತ
ಮಸ್ತಕದಲಿ ಜ್ಞಾನವ ತುಂಬಬೇಕು
ಪಂಕಜಾ .ಕೆ.
Comments
Post a Comment