ಮುಂಜಾವು
ಬಾನಲ್ಲಿ ಹಾಸಿದ ಮಂಜಿನ ಸೆರಗನು
ಸರಿಸುತ ಬಂದನು ರವಿತೇಜ
ರವಿತೇಜದ ಬಿಸಿ ಸ್ಪರ್ಶಕೆ ನಾಚಿ
ತಾವರೆ ಅರಳಿತು ಕೊಳದಲ್ಲಿ
ರವಿತೇಜನು ಉದಯಿಸಿದ ಕಂಡು
ಹಕ್ಕಿಗಳುಲಿದವು ಮುದದಿಂದ
ಗಿಡದಲಿ ಅರಳಿದ ಹೂಗಳು
ನರುಗಂಪನು ಎಲ್ಲೆಡೆ ಹರಡಿದವು
ಗಿಡದಲಿಗೂಡನು ಕಟ್ಟಿದ ಹಕ್ಕಿಗಳಿಂಚರ
ಮನಕೆ ಮುದವನು ತುಂಬುತಿದೆ
ಮನದಲಿ ತುಂಬಿದ ಉಲ್ಲಾಸ
ಮುಖದಲಿ ಮೂಡಿತು ಮಂದಹಾಸ
ಬಾನಲಿ ಕಲಸಿದ ಚೆಲುವಿನ ನಣ್ಣ
ಕಣ್ಮನ ವನ್ನು ತುಂಬುತಿದೆ
ಹೂಗಳ ನರುಗಂಪನು ಸವಿಯುತ
ನಾಸಿಕದ ಹೊಳ್ಳೆ ಗಳರಳಿದವು
ಹುಲ್ಲಿನ ಹಾಸಲಿ ಹರಡಿದ ಮಂಜಿನ ಹನಿಗಳು
ಮುತ್ತಿನ ಮಣಿಗಳ ತೆರದಿ ತೋರುತ್ತಿದೆ
ಮುಂಜಾವಿನ ಈ ಸುಂದರ ದೃಶ್ಯಸವಿಯುತ ಕಣ್ಣುಗಳೆರಡು ಸಾರ್ಥಕ್ಯವ ಭಾವವತಾಳಿದವು
ಎಲ್ಲೆಡೆ ತುಂಬಿದಪ್ರಕೃತಿಯಸೌಂದರ್ಯ
ಕವಿ ಮನದಲಿಕವಿತೆಯ ಒರತೆಯ ಸ್ಪುರಿಸುತ್ತಿದೆ
ಪಂಕಜಾ.ಕೆ ಮುಡಿಪು
Comments
Post a Comment