ನೀರೀಕ್ಷೆ
ಸೆಖೆಗಾಲದ ಸೆಖೆಯ ಝಳ
ಮೈಯಲ್ಲಿಇಳಿಯುತ್ತಿದೆ ಬೆವರ ಝಳ
ಬಾಂದಲದಲ್ಲಿ ಕರಿಮೋಡಗಳ ದಂಡು
ಮನದಲ್ಲಿ ಮೂಡಿಸುತ್ತಿದೆ ಆಶೆಯ ದಿಂಡು
ಬೇಸಿಗೆಯ ಕಡು ಬಿಸಿಲ ತಾಪ
ಸುಡುತ್ತಿದೆ ಮೈಯನು ಪಾಪ
ಮಳೆಯ ನೀರಿಕ್ಷೆಯ ತಪ
ನೀರಿನದೇ ನಿತ್ಯ ಜಪ
ಭೂತಾಯಿ ಬಿರಿದು ನಿಂತಿದೆ
ಮಳೆಯ ನೀರೀಕ್ಷೆಯಲಿ ಸೋತಿದೆ
ಮುನಿಸು ತೊರೆದು ಬೇಗ ಬಾ ವರುಣ
ಇಲ್ಲವೇ ನಿನಗೆ ಇನಿತೂ ನಮ್ಮಲ್ಲಿ ಕರುಣ
ಒಲವ ರಸವ ಬೇಗ ಹನಿಸು
ಜೀವನೋತ್ಸಾಹ ವ ತುಂಬಿಸು
ಪಂಕಜಾ.ಕೆ.
Comments
Post a Comment