ಇಳೆಯ ನಿರೀಕ್ಷೆ
ಹೊದ್ದಿರುವಉರಿಮುಖವನೊಮ್ಮೆಸಡಿಲಿಸಲಾರೆಯಾ
ಇಳೆಯ ಕಾತರದನಿರೀಕ್ಷೆಯ ತಪವ ಗಮನಿಸಲಾರೆಯ
ಕಾದಿರುವ ಬುವಿಗೆ ತಂಪನುಣಿಸಲು ವರುಣ ನೀ ಬೇಗ ಬಾರೆಯ
ಇಳೆಯ ಬಿಸಿಯನು ತಣಿಸಿ ಮನಸಿಗೆ ಮುದವನು ತಾರೆಯಾ
ಹಸಿರ ಸೆರಗನು ಸರಿಸಿ ನಿಂತಿಹಳು ಪ್ರಕೃತಿ
ಮಳೆ ಮೋಡಗಳಲೆಲ್ಲಾ ತುಂಬಿದೆ ವಿಕೃತಿ
ಇಂದುಬಂದಾನುನಾಳೆಬಂದಾನುನಿರೀಕ್ಷೆಯಲಿರುವಳು ಇಳೆ
ಕಾಯುವುದು ಬಲು ಕಷ್ಟ ಅಲ್ಲವೇ ಹೇಳು ಇನಿಯಾ
ಜೀವನದಿಗಳು ಬತ್ತಿದೆ ಒಲವ ರಸವ ಸ್ಪುರಿಸದೆ
ಒಮ್ಮೆ ನೀನು ಬಂದು ಅಪ್ಪಿ ತನುಮನವನು ಅರಳಿಸು
ಹಸಿರು ಸೆರಗಲಿ ಹೂವು ಅರಳಲಿ
ದುಂಬಿಗಳು ಮಧುವ ಹೀರುತ ನಲಿಯಲಿ
ತಪವ ಗೈಯುತ ಇಳೆಯುನಿಂತಿಹಳು
ಮಳೆಯ ನೀರೀಕ್ಷೆಯಲಿ ತನುಮನವನು ಅರಳಿಸಿ
ಪಂಕಜಾ ಕೆ.
Comments
Post a Comment