ಪ್ರೀತಿ ಹೂವು
ಪ್ರೀತಿಯ ಹೂವೊಂದು ಅರಳಿದಾಗ
ಬಾಳಲಿ ಮೂಡುತಿದೆ ಹೊಸರಾಗ
ಮೈಯಲಿ ತುಂಬುತಿದೆ ನವಿರು ಕಂಪನ
ಬಾಳೆಲ್ಲಾ ಆಗುತಿದೆ ಚೆಲುವಿನ ಹೂಬನ
ಜೀವಸೆಲೆಯನು ಉಕ್ಕಿಸುತಿದೆ ಪ್ರೀತಿ
ಹೊಮ್ಮುತಿದೆ ಮೈ ಮನದಲಿ ಕಾಂತಿ
ಎಲ್ಲೆಲ್ಲೂ ತೋರುತಿದೆ ನವೀನತೆಯ ಗುಂಗು
ಬಾಳಲಿ ತುಂಬುತಿದೆ ನವೋಲ್ಲಾಸದ ರಂಗು
ಪ್ರೀತಿಯಿಲ್ಲದ ಮನುಜನ ಜೀವನ
ಅದು ಒಂದು ಮಸಣಕ್ಕೆ ಸಮಾನ
ಒಲವ ಬಳ್ಳಿಯ ಜೀವಜಲವೇ ಪ್ರೀತಿ
ಇರಲಿ ಎಂದೆಂದೂ ಅದರಲ್ಲೊಂದು ಮಿತಿ
ಇನಿಯನರ ಮನೆಯ ರಾಣಿ
ಅದರಲ್ಲಿ ತಾನೊಬ್ಬಳೇ ಅರಗಿಣಿ
ನಿತ್ಯವೂ ಬಾಳಿನಲಿ ತುಂಬಿರಲು ಒಲವು
ತುಂಬುತಿದೆ ಹೂ ಮನದಲಿ ನಲಿವು
ಪ್ರೀತಿ ಎಂಬುದು ಚೆಲುವಾದ ದೋಣಿ
ಅದರಲ್ಲಿ ಸಾಗುತ್ತಿದೆ ನಮ್ಮ ಪಯಣ
ಗುರಿ ಸೇರುವುದರಲ್ಲಿದೆ ಜೀವನ
ನಗು ನಗುತಾ ಬಾಳುವುದೇ ಸಾಧನ
ಪಂಕಜಾ.ಕೆ.
Comments
Post a Comment