ಗಜಲ್ 13
ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು
ನೋವು ನಲಿವುಗಳನ್ನು ಒಂದಾಗಿ ಕಾಣಬೇಕು
ಸಮುದ್ರದಲ್ಲಿ ಅಲೆಯ ಹೊಡೆತವದು ಸಹಜ
ಜೀವನದಲ್ಲಿ ಗಟ್ಟಿಯಾಗಿ ನಿಲ್ಲುತ್ತ ಸವಾಲಾಗಿ ತೆಗೆದುಕೊಳ್ಳಬೇಕು
ಲೋಕದ ಜನರ ನಡವಳಿಕೆಯಲ್ಲಿ ಇರಬಹುದು ವ್ಯತ್ಯಾಸ
ಮನದಲ್ಲಿ ಶಾಂತಿಯನು ತುಂಬುತ್ತಾ ಹಾಯಾಗಿ ಇರಬೇಕು
ಬೇನೆ ಬೇಸರಗಳಿರದಿರದೇ ಜೀವನದಲ್ಲಿ
ಅಳುತ್ತಾ ಕೂರದೆ ಎದುರಿಸಿ ಸುಖವಾಗಿ ಬಾಳಬೇಕು
ಕೆಸರಿನಲ್ಲಿದ್ದರೂ ಪಂಕಜಾ ಅರಳದಿರುವುದೇ
ಅಂಟಿಯೂ ಅಂಟದಂತೆ ಸಮರಸವಾಗಿ ಇರಬೇಕು
ಪಂಕಜಾ.ಕೆ.
Comments
Post a Comment