ನನ್ನ ಪ್ರೀತಿಯ ಅಪ್ಪ
ಹೊತ್ತುಹೆತ್ತುಮುದ್ದಾಡಿರಬಹುದು ಅಮ್ಮ
ನೂರಾರು ಚಿಂತೆ ನೋವುಗಳ ಎಡೆಯಲೂ
ಹೆಣ್ಣು ಗಂಡು ಎಂಬ ಭೇದಭಾವವ ತೋರದೆ
ಮಕ್ಕಳೆಲ್ಲರನು ಪ್ರೀತಿಯಿಂದ ನೋಡುತ
ಒಳ್ಳೆಯ ದಾರಿಯಲಿ ನಡೆಯಲು ಕಲಿಸಿ
ಹೆಜ್ಜೆ ಹೆಜ್ಜೆಗೂ ಕಣ್ಣ ರೆಪ್ಪೆಯ ತೆರದಿ ನೀ ಕಾಯ್ದು
ತಂದೆ ನಮ್ಮೆಲ್ಲರನ್ನು ಒಂದು ನೆಲೆಗೆ
ನಿಮ್ಮ ನೆನಪು ಅನುದಿನವು ಮನದಲಿ ತುಂಬಿರಲು
ನಿಮಗೊಂದು ದಿನವಿಟ್ಟು ನೆನೆಯಬೇಕೆ
ನೀವು ಇಂದು ನಮ್ಮನಗಲಿದರೂ
ನಮ್ಮೊಡನೆಯೇ ಇರುವ ಭಾವ ಮನದಿ
ನಿಮ್ಮನೆನಪೊಂದೊಂದೂ ಮಧುರ ನೆನಪು
ಮರೆಯಲಾರೆ ನಿಮ್ಮ ಪ್ರೋತ್ಸಾಹ ದ ನುಡಿಗಳ
ನಿಮ್ಮ ಆ ಧೀಮಂತ ವ್ಯಕ್ತಿತ್ವದ ನೆನಪು ಮಾಸಲಾರದೆಂದಿಗೂ ನಿತ್ಯಅದು ನಮಗೊಂದು ಬೆಳಕು
ಪಂಕಜಾ .ಕೆ.
Comments
Post a Comment