ಶುಭ್ರ ಬಿಳುಪು
ಸೌಮ್ಯತೆಯ ಸಂಕೇತ
ಇರಲಿಲ್ಲ ಅದರಲ್ಲಿ
ಕಪ್ಪು ಚುಕ್ಕಿ
ಹಾರುತಿದೆ ಬಾನಲ್ಲಿ
ರೆಕ್ಕೆ ಬಿಚ್ಚಿ
ಪಂಕಜಾ.ಕೆ
[27/11/2017, 9:30 AM] pankajarambhat: ಆಶೆ
ನಿನ್ನ ಪದತಲದಲ್ಲಿ
ದುಂಬಿಯಾಗುವಾಶೆ
ಜಗದ ಜಂಜಾಟಗಳ ಮರೆತು
ನಿನ್ನ ನಾಮಮೃತವ
ಸವಿಯುತ್ತಲಿರುವಾಶೆ
ಮುಖವಾಡ ಧರಿಸಿರುವ
ಮನುಜರ ಜತೆ ಒಡನಾಟ
ಕ್ಕಿಂತ ನಿನ್ನ ಸೇವೆಯಲ್ಲೇ
ದಿನ ಕಳೆಯುವಾಶೆ
ದೇವ ದೇವನ ನೆನೆಯುತ್ತ
ಹಕ್ಕಿಯಂತೆ ಹಾರುವಾಶೆ
ಪಂಕಜರಾಮ್
[30/11/2017, 10:25 PM] pankajarambhat: ಆಸ್ತಿಕ .... ನಾಸ್ತಿಕ
ದೈವ ಭಕ್ತಿಯು ಇರಲು
ತುಂಬಿತು ಸಾತ್ವಿಕ ಕಳೆ
ಉಕ್ಕಿತು ಮನದಲಿ ಜೀವನೋತ್ಸಾಹ ಸೆಲೆ
ನಾಸ್ತಿಕ ಜನರ ಮುಖದಲ್ಲಿ
ತುಂಬಿದ ಪ್ರೇತ ಕಳೆ
ಕಳೆವುದುಇದು
ನಮ್ಮಜೀವ ಸೆಲೆ
ಸಾತ್ವಿಕ ಜನರ ಒಡನಾಟ
ಮುಕ್ತಿ ಮಾರ್ಗದ ಪಯಣ
ನಾಸ್ತಿಕ ಜನರ ಒಡನಾಟ
ಮಸಣ ದ ದಾರಿಯ ಪಯಣ
ಪಂಕಜರಾಮ್
Comments
Post a Comment