ಸ್ಪರ್ಧೆಗಾಗಿ
ಅಮ್ಮ
ಅಮ್ಮನ ಗರ್ಭದಲಿಬೆಚ್ಚಗೆ ಮಲಗಿ
ರಕ್ತಮಾಂಸಗಳ ಪಡೆಯುತ ಬೆಳೆದು
ಭೂಮಿಗೆ ಬಂದಾಗಲೊಮ್ಮೆ ತಬ್ಬಿಬ್ಬಾಗಿ
ಅಳುವ ಕಂದನ ತುಟಿಗೆಎದೆಯ ಅಮೃತವ ಕುಡಿಸಿ
ಜೋಗುಳವ ಹಾಡುತ್ತಾ ಲಾಲಿಗರೆದು
ಅಮ್ಮ ನೀನಿತ್ತ ಕೈತುತ್ತನುಂಡು
ನಿನ್ನ ಮಡಿಲಿನಲ್ಲಿ ಹಾಯಾಗಿ ಬೆಳೆದು
ವಿದ್ಯಾ ಬುದ್ದಿಗಳ ಕಲಿತು ನಲಿದು
ಬೆಳೆದೆ ನಾ ನಿನ್ನ ಋಣ ದಲಂದು
ನೀ ಕೊಟ್ಟಈ ದೇಹ ಬಾಗುತಿದೆ ಋಣಭಾರ ದಲ್ಲಿಂದು
ನನ್ನಮ್ಮ ನಿನ್ನ ಋಣ ತೀರಿಸಲಿ ಹೇಗೆ
ನಾಬೆಳೆದುನಿನಗಿಂದುಕೀರ್ತಿಯನುತರುವೆ
ಹರಸುಬಾನೀಎನ್ನಎಲ್ಲಿದ್ದರಿಂದೇ
ಪಂಕಜಾ.ಕೆ. ಮುಡಿಪು
Comments
Post a Comment