ಸ್ವಾತಂತ್ರ್ಯ ದಿನಾಚರಣೆ
ಬಂದಿತು ಸ್ವಾತಂತ್ರ್ಯ ದಿನಾಚರಣೆ
ಹಾರಿತು ಎಲ್ಲೆಡೆ ತ್ರಿವರ್ಣಧ್ವಜ
ಬ್ರಿಟಿಷರು ಆಳಿದ ನೆಲದಲಿ
ಹಚ್ಚಿದರು ಸ್ವಾತಂತ್ರ್ಯದ ಹಣತೆ
ಉರಿಸಿದರು ಸ್ವಾಭಿಮಾನದ ಸೊಡರು
ಬೂದಿಯಾಯಿತೆ ಅದರ ಕಾವು
ಯಾರಿಗೆ ಬಂತು ಸ್ವಾತಂತ್ರ್ಯ
ಎಲ್ಲಿದೆ ನಮಗೆ ಸ್ವಾತಂತ್ರ್ಯ
ಎಲ್ಲೆಲ್ಲೂ ತುಂಬಿದೆ ಕೊಲೆ ಸುಲಿಗೆ
ಎಂದಿಗೆ ನಮಗೆ ಇದರಿಂದ ಬಿಡುಗಡೆ
ವರ್ಷ ವರ್ಷವೂ ಹಾರಿಸುವರು ಬಾವುಟ
ಕೇವಲ ಆಚರಣೆಗೆ ಮಾತ್ರ ಅದು ಸೀಮಿತ
ಗಡಿಯನ್ನು ಕಾಯುವ ವೀರಯೋಧ
ವೈರಿಗಳ ಸದೆಬಡಿಯಲಿದೆಯೇ ಸ್ವಾತಂತ್ರ್ಯ
ಮಕ್ಕಳು ಮುದುಕಿಯರನ್ನೂ ಬಿಡದ
ಕಾಮ ಪಿಶಾಚಿಗಳ ನಾಡಾಗಿದೆ ಸ್ವತಂತ್ರ ಭಾರತ
ತುಂಬಿದೆ ಎಲ್ಲೆಡೆ ಭ್ರಷ್ಟಾಚಾರ
ನಡೆಯುತ್ತಿದೆತೆರೆಮರೆಯಲಿ ಸ್ವೇಚ್ಚಾಚಾರ
ಸಿಗಬೇಕು ಕೃಷಿಕರಿಗೆ ಸೈನಿಕರಿಗೆ ಘನತೆ ಗೌರವ
ನಿಲ್ಲಬೇಕು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ
ಅದಿಲ್ಲದೆ ಬರಿಯ ಆಚರಣೆಯಲೇನಿದೆ ಸಂಭ್ರಮ
ಅರಿಯಬೇಕು ಸ್ವಾತಂತ್ರ್ಯದ ಮೌಲ್ಯ
ಉಳಿಸಬೇಕು ತಾಯಿ ಭಾರತಿಯ ಮಾನ ಪ್ರಾಣ
ಪಂಕಜಾ.ಕೆ.
Comments
Post a Comment