ಬಾರೋ ಗೋಪಾಲ
ಕೊಳಲನೂದುತ ಬಂದ
ರಾಧೆಯ ಮನವ ಗೆದ್ದ
ರಾಧಾರಮಣ ಶ್ರೀಕೃಷ್ಣ
ಬಾ ಬಾರೋ ಗೋಪಾಲ
ಯಶೋದೆ ನಂದನ ನಂದ ಕಿಶೋರ
ದೇವಕಿ ತನಯ ಶ್ರೀ ಕೃಷ್ಣ
ಗೋಪಿಲೋಲ ಹೇ ಗೋಪಾಲ
ಬಾ ಬಾರೋ ನಂದ ಕಿಶೋರ
ಕೊಡುವೆ ನಿನಗೆ ಹಾಲು ಬೆಣ್ಣೆ
ಗೆಜ್ಜೆಯಕಾಲ್ಗಳನಾದವ ಬೀರುತ
ಅಂಬೆಗಾಲಿಡುವ ಮುದ್ದು ಚೋರ
ಬಾ ಬಾರೋ ಯಶೋದೆ ಕಂದ
ನೀಲ ಮೇಘನೆ ಸುಂದರ ನಯನನೆ
ಗೋಪಿಯರೆಲ್ಲರ ಮನವ ಸೆಳೆದ
ಕಾಳಿಂಗ ಮರ್ಧನ ಗೋಪಿಲೋಲ
ಬಾ ಬಾರೋ ಮುಕುಂದ
ಅಷ್ಟಮಿ ದಿನದಲಿ ಭಜಿಸುವೆ ನಿನ್ನಾ
ಬೇಗನೆ ಬಂದು ಹರಸು ನೀಎನ್ನ
ರಾಧಾಮಾಧವ ವೇಣು ವಿಹಾರ
ಬಾ ಬಾರೋ ಗೋಪಾಲ
ಪಂಕಜಾ. ಕೆ ಮುಡಿಪು ಕುರ್ನಾಡು
Comments
Post a Comment