ಹಳ್ಳಿಯ ಜೀವನ
(ಜಾನಪದ ಕವನ)
ಹಳ್ಳಿಲಿ ಏನುಂಟು
ಡೆಲ್ಲಿಲಿ ಎಲ್ಲಉಂಟು
ಹೊರಟವಿನಿ ಡೆಲ್ಲಿಗೆ ನೋಡವ್ವ
ಹೊರಟಿವಿನಿ ಡೆಲ್ಲಿಗೆ ನೋಡವ್ವ
ಡೆಲ್ಲಿಗೆ ಹೋದಮೇಲೆ
ಗೊತ್ತಾಯ್ತು ನೋಡವ್ವ
ಹಳ್ಳಿಯ ಜೀವನದ ಆನಂದ
ಹಳ್ಳಿಯ ಜೀವನದ ಆನಂದ ನೋಡವ್ವ
ಹಳ್ಳಿಲಿ ಇರುವಂತ
ತಿಳಿನೀರಕೊಳವೆಲ್ಲಿ
ಡೆಲ್ಲಿಯ ಕೊಳಕು ನೀರೆಲ್ಲಿ
ನಮ್ಮವ್ವ ಕೊಳಕು ನೀರೆಲ್ಲಿ
ಹಕ್ಕಿಗಳ ಹಾಡು ಕಿವಿಗಿಂಪು ನನ್ನವ್ವ
ಡೆಲ್ಲಿಲಿ ಮೈಕಾಸುರನ ಅಬ್ಬರ ನೋಡವ್ವ
ಹಳ್ಳಿಯ ಸಂತೋಷ ಇಲ್ಲೆಲ್ಲವ್ವ
ಹಳ್ಳಿಯ ಸಂತೋಷ ಇಲ್ಲೆಲ್ಲವ್ವ
ಹುಡುಕಿದರೂ ಸಿಗದವ್ವ
ಪ್ರೀತಿ ವಿಶ್ವಾಸ ನೋಡವ್ವ
ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ
ಹಳ್ಳಿಲಿ ಇರುವಂತ ಪ್ರೀತಿ ಇಲ್ಲೆಲ್ಲವ್ವ
ಹಳ್ಳಿಲಿ ಇರುವೆವು ಎಲ್ಲರೂ
ಒಂದಾಗಿ ಪ್ರೀತಿ ವಿಶ್ವಾಸದ ತವರೂರು
ಪ್ರೀತಿವಿಶ್ವಾಸದ ತವರೂರು ನಮ್ಮವ್ವ
ಹಳ್ಳಿಯ ಜೀವನ ಸೊಗಸವ್ವ
ಕಷ್ಟ ಸುಖದಲ್ಲೂಜತೆಯುಂಟು ನೋಡವ್ವ
ಡೆಲ್ಲಿ ಲಿ ಇವೆಲ್ಲಾ ಎಲ್ಲವ್ವ
ಇರುವುದು ದುಡ್ಡು ಒಂದೇ ನೋಡವ್ವ
ದುಡ್ಡು ಒಂದೇ ನೋಡವ್ವ
ಬೆಳಗಾತ ಮೂಡಣದಿಮೂಡೈತೆ
ಬಂಗಾರ ಬಟ್ಟಲು ನೋಡವ್ವ
ಓಬೇಲೆ ಹಾಡುತ್ತ ಹೊಂಟ್ಯಾನು ರೈತ
ಓಬೇಲೆ ಹಾಡುತ್ತ ಹೊಂಟ್ಯ ನು
ಎತ್ತುಗಳ ಕೊರಳ ಗಂಟ್ಯಾ ಕೇಳ್ಳ್ಯಾವ
ಸುತ್ತೆಲ್ಲ ಹಸಿರೇ ತುಂಬ್ಯಾವ
ಸುತ್ತೆಲ್ಲ ಹಸಿರೇ ತುಂಬ್ಯಾವ ನಮ್ಮವ್ವ
ಹಳ್ಳಿಯ ಸೊಗಡ ನೋಡವ್ವ
ಜೀವನ ಸಂತೋಷ ಹಳ್ಳಿಲಿ ತುಂಬೈತೆ
ಡೆಲ್ಲಿ ಲಿ ಎನೈತೆ ಹೇಳವ್ವ
ಡೆಲ್ಲಿ ಲಿ ಎನೈತೆ ನಮ್ಮವ್ವ
ಬಸ್ ಕಾರಿನ ಧೂಳವ್ವ
ಪಂಕಜಾ .ಕೆ. ಮುಡಿಪು
Comments
Post a Comment