ನೆನಪಿನ ದೋಣಿ
ಭಾವನೆಗಳ ಬಾರದಲಿ ಹೃದಯ ಜಗ್ಗಿದೆ
ನಿನ್ನ ನೆನಪಿನ ದೋಣಿಯಲಿ ಮನವು ತೇಲಿದೆ
ನನ್ನೆದೆಯ ಒಲವ ಪಲ್ಲವಿಗೆ ನೀ ಜತೆಯಾದೆ
ಬಾಳಪಯಣದಲಿ ನೀ ಬಂದೆ ಜತೆಯಾಗಿ
ನನ್ನೊಲವ ಸವಿ ಸವಿದು ನೀ ಉಸುರಿದೆ ಗೀತೆಯಾಗಿ
ನನ್ನಂತರಂಗದಲಿ ನಿ ಹಾಡಿದೆ ರಾಗದಲಿ
ಎದೆಯ ಗೂಡಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿ
ತವಕದಲಿ ಇನಿಯನಾಗಮನದದಾರಿ ಕಾಯ್ದಿದೆ
ತನುಮನದಲಿ ಉಲ್ಲಾಸ ಹುರುಪು ತುಂಬಿದೆ
ಕನಸುಗಳ ಕಟ್ಟುತ್ತ ಹಾರಡುತಿದೆ ಮನ
ಒಲಿದ ಜೀವಕ್ಕೆ ಕಾಯುವಿಕೆಯ ತಪ
ಮಳೆಹನಿಗೆ ಮುಖವೊಡ್ಡಿದಂತ ಸುಖ
ಪಂಕಜಾ.ಕೆ.
Comments
Post a Comment