ಕಾಯುತಿರುವೆ ನಿನಗಾಗಿ
ಮಂಜು ಮುಸುಕಿದ ದಾರಿಯಲಿ
ಬಿಸುತಿಹ ಕುಳಿರ್ಗಾಳಿಯಲಿ
ಕಾಯುತಿರುವೆನು ನಿನಗಾಗಿ
ಸುರಿಯುತಿಹ ಇಬ್ಬನಿಯಲಿ
ಮೀಯುತಿಹ ಬರಿ ಮೈಯಲಿ
ಕಾಯುತಿರುವೆನು ನಿನಗಾಗಿ
ಎಂದು ಬರುವೆಯೋ ನಲ್ಲೆ
ಮನವ ಕದ್ದಿಹ ಚೋರೆ
ಕಾಯುತಿರುವೆನು ನಿನಗಾಗಿ
ಬಳಸುತಿಹ ನಳಿತೋಲ್ಗಳು
ಬಳುಕುತಿಹ ಚೆಲು ನಡುವು
ಕಾಯುತಿರುವೆನು ನಿನಗಾಗಿ
ತುಂಬಿ ನಿಂತಿಹ ಚೆಲುವು
ಅರಳಿ ನಗುತಿದೆ ಮನವು
ಕಾಯುತಿರುವೆನು ನಿನಗಾಗಿ
ಮನಸು ತುಂಬಿದೆ ಒಲವು
ಕೊಡುವೆ ನಿನಗೆ ಎಲ್ಲವು
ಕಾಯುತಿರುವೆನು ನಿನಗಾಗಿ
ಎಂದು ಬರುವೆಯೋ ಚೆಲುವೆ
ಬಳಸಿ ನನ್ನನು ಮರೆಸುವೆ
ಕಾಯುತಿರುವೆನು ನಿನಗಾಗಿ
ಪಂಕಜಾ.ಕೆ. ಮುಡಿಪು
Comments
Post a Comment