ಸ್ವಾಮಿ ಶ್ರೀ ಮಂಜುನಾಥ
ನಿಮ್ಮ ದಯೆಯಿಂದ ಬೆಳಗಲಿ
ನಮ್ಮೆಲ್ಲರ ಮನೆ ಮನ
ಬದುಕು ಪಾವನವಾಗಲಿ
ದಯೆತೋರು ಸ್ವಾಮಿ ಶ್ರೀ ಮಂಜುನಾಥ
ಕಷ್ಟಗಳ ಪರಿಹರಿಸಿ
ಆತ್ಮಸ್ಥೈರ್ಯತುಂಬಿ
ಕೈಹಿಡಿದು ನಡೆಸು ತಂದೆ
ಸ್ವಾಮಿ ಶ್ರೀ ಮಂಜುನಾಥ
ಜೀವನದ ಜಂಜಾಟಗಳಲಿ
ತೇಲಿ ಮುಳುಗುತಿರುವ
ನಮ್ಮನುದಡಸೇರಿಸಿ
ಸತ್ಪಥವ ತೋರುಸ್ವಾಮಿಶ್ರೀ ಮಂಜುನಾಥ
ನಿಮ್ಮ ಕರುಣೆಯ ಜಲದ
ಅಮೃತ ಪಾನದಲಿ
ಧನ್ಯಳಾಗುತ ಸಾಗಿ ನಿಂತಿರುವೆ
ದಯೆತೋರು ಸ್ವಾಮಿ ಶ್ರೀ ಮಂಜುನಾಥ
ನಿಮ್ಮ ಅಭಯ ಹಸ್ತವು
ಕಾಯಲಿ ನಮ್ಮೆಲ್ಲರ ನಿತ್ಯ
ಮನಕೆ ಸುಖಶಾಂತಿಸಮೃದ್ಧಿಯ ಕೊಟ್ಟು
ಕಾಪಾಡು ಸ್ವಾಮಿಶ್ರೀ ಮಂಜುನಾಥ
ಪಂಕಜಾ. ಕೆ. ಮುಡಿಪು ಕುರ್ನಾಡು
Comments
Post a Comment